ಇನೋಸಿಟಾಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಟೆಂಪ್ಲೇಟು:Chembox ATCCode
ಮೈಯೊ-ಇನೊಸಿಟಾಲ್[೧]
ಮೈಯೊ-ಇನೊಸಿಟಾಲ್
myo-Inositol
ಹೆಸರುಗಳು
ಐಯುಪಿಎಸಿ ಹೆಸರು
myo-Inositol
Systematic IUPAC name
(1R,2S,3r,4R,5S,6s)-Cyclohexane-1,2,3,4,5,6-hexol
Other names
cis-1,2,3,5-trans-4,6-Cyclohexanehexol
Cyclohexanehexol
Mouse antialopecia factor
Nucite
Phaseomannite
Phaseomannitol
Rat antispectacled eye factor
Scyllite (for the isomer scyllo-inositol)
Vitamin B8
Identifiers
3D model (JSmol)
ChEBI
ChemSpider
ECHA InfoCard 100.027.295
KEGG
UNII
  • InChI=1S/C6H12O6/c7-1-2(8)4(10)6(12)5(11)3(1)9/h1-12H/t1-,2-,3-,4+,5-,6- checkY
    Key: CDAISMWEOUEBRE-GPIVLXJGSA-N checkY
  • InChI=1/C6H12O6/c7-1-2(8)4(10)6(12)5(11)3(1)9/h1-12H/t1-,2-,3-,4+,5-,6-
    Key: CDAISMWEOUEBRE-GPIVLXJGBG
  • O[C@@H]1[C@@H](O)[C@H](O)[C@H](O)[C@H](O)[C@H]1O
ಗುಣಗಳು
ಆಣ್ವಿಕ ಸೂತ್ರ C6H12O6
ಮೋಲಾರ್ ದ್ರವ್ಯರಾಶಿ ೧೮೦.೧೬ g mol−1
ಸಾಂದ್ರತೆ 1.752 g/cm3
ಕರಗು ಬಿಂದು

225 to 227 °C, ಪದವಿನ್ಯಾಸ ದೋಷ: ಗುರುತಿಸಲಾಗದ ಪದ"to". K, ಪದವಿನ್ಯಾಸ ದೋಷ: ಗುರುತಿಸಲಾಗದ ಪದ"to". °F

ಉಷ್ಣರಸಾಯನಶಾಸ್ತ್ರ
ರೂಪಗೊಳ್ಳುವ
ಸ್ಟ್ಯಾಂಡರ್ಡ್ ಶಾಖಪ್ರಮಾಣ
ΔfHo298
−1329.3 kJ/mol
ದಹನದ
ಸ್ಟ್ಯಾಂಡರ್ಡ್ ಶಾಖಪ್ರಮಾಣ
ΔcHo298
−2747 kJ/mol
Pharmacology
Hazards
NFPA 704
NFPA 704 four-colored diamondFlammability code 0: Will not burn. E.g., waterHealth code 1: Exposure would cause irritation but only minor residual injury. E.g., turpentineReactivity code 0: Normally stable, even under fire exposure conditions, and is not reactive with water. E.g., liquid nitrogenSpecial hazards (white): no code
0
1
0
ಚಿಮ್ಮು ಬಿಂದು
(ಫ್ಲಾಶ್ ಪಾಯಿಂಟ್)
Except where otherwise noted, data are given for materials in their standard state (at 25 °C [77 °F], 100 kPa).

>

Infobox references

ಇನೋಸಿಟಾಲ್ - ಶರೀರದಲ್ಲಿ ಉತ್ಪತ್ತಿಯಾಗಿ, ದೇಹದ ಬೆಳೆವಣಿಗೆಗೆ ಅತ್ಯಾವಶ್ಯಕವಾಗಿರುವ, ಸಕ್ಕರೆಗಳಿಗೆ ಸಂಬಂಧಿಸಿದ ಇದನ್ನು ಬಿ-ಕಾಂಪ್ಲೆಕ್ಸ್ ಗುಂಪಿಗೆ ಸೇರಿದ ಜೀವಾತು ಎಂದು ಪರಿಗಣಿಸಿದೆ. ಪ್ರಾಣಿಗಳಲ್ಲಿ ಕೂದಲು ಉದುರುವುದನ್ನು ತಡೆಹಿಡಿಯುವ ಮತ್ತು ಚರ್ಮರೋಗನಿವಾರಣೆ ಮಾಡುವ ಜೀವಾತು ಇದೇ. ಹೆಕ್ಸ್‍ಹೈಡ್ರೋಸೈಕ್ಲೊಹೆಕ್ಸೇನಿನ ಒಂಬತ್ತು ಸ್ಟೀರಿಯೋ ಸಮಘಟಕಗಳಲ್ಲಿ (ಐಸೊಮರ್ಸ್) ಒಂದು ಮಾತ್ರ ಜೀವಿತ ಪ್ರಾಮುಖ್ಯ ಪಡೆದಿದೆ. ಅದನ್ನು ಇನೋಸಿಟಾಲ್ ಅಥವಾ ಮೈಯೊಇನೊಸಿಟಾಲ್ ಎನ್ನುತ್ತಾರೆ. ಶರೀರದ ಮಾಂಸಖಂಡಗಳಿಂದ ಉತ್ಪತ್ತಿಯಾಗುವ ಕೆಲವು ರಸಗಳಲ್ಲಿ ಇನೋಸಿಟಾಲ್ ಎನ್ನುತ್ತಾರೆ. ಶರೀರದ ಮಾಂಸಖಂಡಗಳಿಂದ ಉತ್ಪತ್ತಿಯಾಗುವ ಕೆಲವು ರಸಗಳಲ್ಲಿ ಇನೋಸಿಟಾಲ್ ಇದೆ. ಮಾನವನ ಮಿದುಳಿನಲ್ಲಿ ಮಿದುಳುಬಳ್ಳಿಯಲ್ಲಿ ಇದು ಲೈಪೊಸಿಟಾಲ್ ಎಂಬ ರಂಜಕವುಳ್ಳ ಪದಾರ್ಥರೂಪದಲ್ಲಿದೆ. ಕೆಂಪುರಕ್ತಕಣಗಳುಳ್ಳ ಕೋಶಗಳು ಮತ್ತು ಕಣ್ಣುಗಳಲ್ಲಿರುವ ಕೋಶಗಳಲ್ಲಿ ಇನೋಸಿಟಾಲ್ ಅಲ್ಲದೆ ಕೆಲವು ಹಣ್ಣುಗಳಲ್ಲೂ ಕಾಯಿಪಲ್ಯಗಳಲ್ಲೂ ಮತ್ತು ಕೆಲವು ಧಾನ್ಯಗಳಲ್ಲೂ ಇನೋಸಿಟಾಲ್ ಫೈಟಿಕ್ ಆಮ್ಲದ ಹೆಕ್ಸ್‍ಫಾಸ್ಫೆರಿಕ್ ಎಸ್ಟರಾಗಿ ದೊರೆಯುತ್ತದೆ. ನಮ್ಮ ಶರೀರದಲ್ಲಿ ಗ್ಲೈಕೋಜನ್ ಶೇಖರವಾಗುವಂತೆ ಷಾರ್ಕ್ ಗುಂಪಿನ ಮೀನುಗಳ ದೇಹದಲ್ಲಿ ಇನೋಸಿಟಾಲ್ ಶೇಖರವಾಗುತ್ತದೆ.

ಇನೋಸಿಟಾಲ್ ಹರಳಾಕೃತಿಯ, ನೀರಿನಲ್ಲಿ ಕರಗುವ ಮದ್ಯಸಾರಗುಂಪಿನ ವಸ್ತು. ಇದರಲ್ಲಿ ಹೆಚ್ಚು- ಭಾಗಗಳಿರುವುದರಿಂದ ಸಕ್ಕರೆಯಂತೆಯೇ ಇದು ಸಿಹಿ. ಶರ್ಕರ ಪಿಷ್ಟ ಪದಾರ್ಥಗಳ ಮತ್ತು ಬೆಂಜೀನ್ ಉಂಗುರವುಳ್ಳ ವಸ್ತುಗಳ ಲಕ್ಷಣಗಳೆರಡೂ ಇವೆ. ಇದರ ರಚನೆ ಚಿತ್ರದಲ್ಲಿ ತೋರಿಸಿದೆ.

ರಚನೆ[ಬದಲಾಯಿಸಿ]

ಮೈಯೋ-ಇನೋಸಿಟಾಲ್ ಸೈಕ್ಲೋಹೆಕ್ಸೇನ್-1,2,3,4,5,6-ಹೆಕ್ಸಾಲ್‌ನ ಜೈವಿಕವಾಗಿ ಪ್ರಮುಖ ರೂಪವಾಗಿದೆ. ಇದು ಮೆಸೊ ಸಂಯುಕ್ತವಾಗಿದೆ, ಅಂದರೆ ಇದು ದೃಗ್ವೈಜ್ಞಾನಿಕವಾಗಿ ನಿಷ್ಕ್ರಿಯವಾಗಿದೆ ಏಕೆಂದರೆ ಇದು ಸಮ್ಮಿತಿಯ ಸಮತಲವನ್ನು ಹೊಂದಿದೆ. ಇದನ್ನು ಹಿಂದೆ ಮೆಸೊ-ಇನೊಸಿಟಾಲ್ ಎಂದು ಕರೆಯಲಾಗುತ್ತಿತ್ತು, ಆದರೆ ಇತರ ಮೆಸೊ ಐಸೋಮರ್‌ಗಳು ಇರುವುದರಿಂದ, ಮೈಯೊ-ಇನೊಸಿಟಾಲ್ ಈಗ ಆದ್ಯತೆಯ ಹೆಸರಾಗಿದೆ. ಮೈಯೋ-ಇನೋಸಿಟಾಲ್ ಜೊತೆಗೆ, ನೈಸರ್ಗಿಕವಾಗಿ ಕಂಡುಬರುವ ಇತರ ಸ್ಟಿರಿಯೊಐಸೋಮರ್‌ಗಳು ಸ್ಕಿಲೋ-, ಮ್ಯೂಕೋ-, ಡಿ-ಚಿರೋ-, ಎಲ್-ಚಿರೋ- ಮತ್ತು ನಿಯೋ-ಇನೋಸಿಟಾಲ್, ಆದರೂ ಅವು ಪ್ರಕೃತಿಯಲ್ಲಿ ಕನಿಷ್ಠ ಪ್ರಮಾಣದಲ್ಲಿ ಕಂಡುಬರುತ್ತವೆ. ಇತರ ಸಂಭವನೀಯ ಐಸೋಮರ್‌ಗಳು ಅಲೋ-, ಎಪಿ- ಮತ್ತು ಸಿಸ್-ಇನೋಸಿಟಾಲ್. ಅವರ ಹೆಸರುಗಳು ಸೂಚಿಸುವಂತೆ, ಎಲ್- ಮತ್ತು ಡಿ-ಚಿರೋ ಇನೋಸಿಟಾಲ್ ಎನಾಂಟಿಯೋಮರ್‌ಗಳ ಏಕೈಕ ಜೋಡಿ (ಕನ್ನಡಿ-ಚಿತ್ರ ರೂಪಗಳು). ಉಳಿದೆಲ್ಲವೂ ಮೆಸೊ ಸಂಯುಕ್ತಗಳಾಗಿವೆ.[[೨]

myo- scyllo- muco- chiro-
neo- allo- epi- cis-

ಅದರ ಅತ್ಯಂತ ಸ್ಥಿರವಾದ ಕನ್ಫರ್ಮೇಶನಲ್ ಐಸೋಮೆರಿಸಂ, ಮೈಯೋ-ಇನೋಸಿಟಾಲ್ ಐಸೋಮರ್ ಚೇರ್ ಕಾನ್ಫರ್ಮೇಶನ್ ಅನ್ನು ಊಹಿಸುತ್ತದೆ, ಇದು ಗರಿಷ್ಠ ಸಂಖ್ಯೆಯ ಹೈಡ್ರಾಕ್ಸಿಲ್‌ಗಳನ್ನು ಸಮಭಾಜಕ ಸ್ಥಾನಕ್ಕೆ ಚಲಿಸುತ್ತದೆ, ಅಲ್ಲಿ ಅವು ಅತ್ಯಂತ ದೂರದಲ್ಲಿವೆ. ಪರಸ್ಪರ ಹೊರತುಪಡಿಸಿ. ಈ ರಚನೆಯಲ್ಲಿ, ನೈಸರ್ಗಿಕ ಮೈಯೋ ಐಸೋಮರ್ ಒಂದು ರಚನೆಯನ್ನು ಹೊಂದಿದೆ ಇದರಲ್ಲಿ ಆರು ಹೈಡ್ರಾಕ್ಸಿಲ್ಗಳಲ್ಲಿ ಐದು (ಮೊದಲ, ಮೂರನೇ, ನಾಲ್ಕನೇ, ಐದನೇ ಮತ್ತು ಆರನೇ) ಸಮಭಾಜಕ, ಆದರೆ ಎರಡನೇ ಹೈಡ್ರಾಕ್ಸಿಲ್ ಗುಂಪು ಅಕ್ಷೀಯವಾಗಿದೆ.

ಉಪಯೋಗಗಳು[ಬದಲಾಯಿಸಿ]

೧೯೨೮ ರಲ್ಲಿ ಇ.ವಿ. ಈಸ್ಟ್‍ಕಾಟ್ ಕೆಲವು ಯೀಸ್ಟುಗಳ ಬೆಳೆವಣಿಗೆಗೆ ಆವಶ್ಯಕವಾಗಿ ಇನೋಸಿಟಾಲ್ ಬೇಕಾದುದೆಂದು ಮೊದಲಬಾರಿಗೆ ತೋರಿಸಿದ.೧೯೪೦ರಲ್ಲಿ ಇನೋಸಿಟಾಲ್ ಇಲಿಗಳಿಗೆ ಅತ್ಯಾವಶ್ಯಕವೆಂದು ವೂಲ್ಲೀ ತೋರ್ಪಡಿಸಿದ. ಆದರೂ ಇದರ ಆವಶ್ಯಕತೆ ಯಾವಾಗಲೂ ಇರಲೇಬೇಕಾದುದು ಕಂಡುಬಂದಿಲ್ಲ. ಕಾರಣ ಇಲಿಗಳ ಬೆಳೆವಣಿಗೆಗೆ ಸಂಬಂಧವಾಗಿ ಒದಗಿಸುವ ಅನೇಕ ಶುದ್ಧ ಆಹಾರ ಪದಾರ್ಥಗಳಲ್ಲಿ ಇನೋಸಿಟಾಲ್ ಸೇರಿಸಿರುವುದಿಲ್ಲ. ಸೂಕ್ಷ್ಮಜೀವಿಗಳ ಸಹಾಯವಿಧಾನದಿಂದ ಇದರ ಪ್ರಮಾಣ ನಿಗದಿ ಮಾಡಿದ್ದಾರೆ. ಕಿಣ್ವಗಳ (ಎಂeóÉೈಮ್ಸ್) ಸನ್ನಿವೇಶದಲ್ಲಿ ಇದರ ಪಾತ್ರವೇನೆಂಬುದು ವಸ್ತುತಃ ತಿಳಿದಿಲ್ಲ. ಶರ್ಕರ ಪಿಷ್ಟಪದಾರ್ಥವಾಗಿ ಅದು ಜೀವವಸ್ತುಕರಣಕ್ಕೆ (ಮೆಟಬಾಲಿಸಂ) ಒಳಗಾಗಬಲ್ಲುದು. ಸೂಕ್ಷ್ಮಜೀವಾಣುಗಳ ಬೆಳೆವಣಿಗೆಗೆ ಇದು ಅತ್ಯಾವಶ್ಯಕ ವಸ್ತುವಾಗಿರುವುದರ ಜೊತೆಗೆ ಇಲಿಗಳಿಗೆ ಕೆಲವು ಸಂದರ್ಭಗಳಲ್ಲಿ ಬೇಕೇಬೇಕಾದ ವಸ್ತುವಾಗಿದೆ. ಇನೋಸಿಟಾಲ್ ಅಭಾವದಿಂದಾಗಿ ಇಲಿಗಳಲ್ಲಿ ಕುಬ್ಜ ಬೆಳೆವಣಿಗೆ ಮತ್ತು ಕೂದಲು ಉದುರುವುದು ಗೋಚರವಾಗುತ್ತದೆ. ಕೆಲವು ಪರೀಕ್ಷಾ ಸನ್ನಿವೇಶಗಳಲ್ಲಿ ಇನೋಸಿಟಾಲ್ ಪಿತ್ತಜನಕಾಂಗದಲ್ಲಿ ಮೇದಸ್ಸು ಶೇಖರಿಸುವುದನ್ನು ನಿವಾರಿಸುವುದರಿಂದ ಅದನ್ನು ಲಿಪೊಟ್ರೋಪಿಕ್ ಏಜೆಂಟ್ ಎಂದು ಪರಿಗಣಿಸಿದ್ದಾರೆ. ಸಮಸ್ಥಾನಿ (ಐಸೋಟೋಪಿಕ್) ಗ್ಲೂಕೋಸನ್ನುಪಯೋಗಿಸಿಕೊಂಡು ನಡೆಸಿದ ಪ್ರಯೋಗಗಳಲ್ಲಿ ಅದು ಇನೋಸಿಟಾಲ್ ಆಗಿ ಪ್ರಾಣಿಗಳಲ್ಲಿ ಪರಿವರ್ತನೆ ಹೊಂದಿರುವುದು ತಿಳಿದುಬಂದಿದೆ. ಕರುಳುಗಳಲ್ಲಿನ ಸೂಕ್ಷ್ಮ ಜೀವಿಗಳು ಇನೋಸಿಟಾಲನ್ನು ಸಾಕಷ್ಟು ಪ್ರಮಾಣದಲ್ಲಿ ಸಂಶ್ಲೇಷಿಸಿವೆ. ಮಾನವನ ಆಹಾರ ಪಟ್ಟಿಯಲ್ಲಿ ಇನೋಸಿಟಾಲ್ ಅವಶ್ಯವೆಂಬುದಕ್ಕೆ ಯಾವ ಸಾಕ್ಷಿಯೂ ಇಲ್ಲ. ಅತ್ಯಂತ ಬೇರ್ಪಡಿಸಿದ ಮಾನವ ಜೀವಕಣಕೂಟ ಅದರ ಸಂವರ್ಧಿಯಲ್ಲಿ (ಕಲ್ಚರ್) ತನ್ನ ಬೆಳೆವಣಿಗೆಗೆ ಈ ವಸ್ತುವನ್ನು ಅಪೇಕ್ಷಿಸುತ್ತದೆ ಎಂಬುದಾಗಿ 1956ರಲ್ಲಿ ಎಚ್. ಈಗಲ್ ತಿಳಿಸಿದ್ದಾನೆ. ಇನೋಸಿಟಾಲಿನ ಪೋಷಣ ಪಾತ್ರದ ಬಗ್ಗೆ ಇನ್ನೂ ಹೆಚ್ಚು ಸಂಶೋಧನಾಭ್ಯಾಸ ಮಾಡಬೇಕೆಂಬುದು ಇದರಿಂದ ವ್ಯಕ್ತವಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. Merck Index (11th ed.). p. 4883.
  2. Majumder, A. L.; Biswas, B. B. (2006-10-03). Biology of Inositols and Phosphoinositides (in ಇಂಗ್ಲಿಷ್). Springer Science & Business Media. ISBN 9780387276007.