ಝರಿ ಜಲಪಾತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಝರಿ ಜಲಪಾತ
ಮಜ್ಜಿಗೆ ಜಲಪಾತ
ದಬ್ದಬೆ ಜಲಪಾತ[೧]
ಝರಿ ಜಲಪಾತ
ಸ್ಥಳಕರ್ನಾಟಕ, ಭಾರತ
ಬಗೆಕ್ಯಾಟರಾಕ್ಟ್, ಸೆಗ್ಮೆಂಟೆಡ್
ಸಮುದ್ರ ಮಟ್ಟದಿಂದ ಎತ್ತರ560 m (1,840 ft)
ಒಟ್ಟು ಉದ್ದ50–70 m (160–230 ft)

ಝರಿ ಜಲಪಾತವು ಭಾರತದ ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ ಮತ್ತು ಬಾಬಾ ಬುಡನ್ ಗಿರಿ ಬಳಿ ಇರುವ ಜಲಪಾತವಾಗಿದೆ.[೨] ಪರ್ವತಗಳಲ್ಲಿ ಹುಟ್ಟುವ ನೀರು ಇಲ್ಲಿ ಕಡಿದಾದ ಬಂಡೆಗಳ ಮೇಲೆ, ಅಗಲವಾದ ಮತ್ತು ತೆಳುವಾದ ಬಿಳಿ ಪದರದಲ್ಲಿ ಹರಿಯುತ್ತದೆ.[೩]

ಜಲಪಾತವು ಬೆಂಗಳೂರಿನಿಂದ ೨೬೭ ಕಿಮೀ ಮತ್ತು ಚಿಕ್ಕಮಗಳೂರಿನಿಂದ ೨೪ ಕಿಮೀ ದೂರದಲ್ಲಿದೆ. ಕಡೂರು ಜಂಕ್ಷನ್ ಇಲ್ಲಿಗೆ ಹತ್ತಿರದ ರೈಲು ನಿಲ್ದಾಣವಾಗಿದೆ (೫೭ ಕಿಮೀ) ಮತ್ತು ಮಂಗಳೂರು ವಿಮಾನ ನಿಲ್ದಾಣವು ಹತ್ತಿರದ ವಿಮಾನ ನಿಲ್ದಾಣವಾಗಿದೆ (೧೮೦ ಕಿಮೀ). ಕಡೂರು ಅಥವಾ ಚಿಕ್ಕಮಗಳೂರಿನಿಂದ ಟ್ಯಾಕ್ಸಿಗಳನ್ನು ಬಾಡಿಗೆಗೆ ಪಡೆಯಬಹುದು, ಆದರೆ ಜಲಪಾತಕ್ಕೆ ಕೊನೆಯ ಐದು ಕಿಮೀ ಜೀಪ್ ಮೂಲಕ ಮಾತ್ರ ತಲುಪಬಹುದು.

ಮಜ್ಜಿಗೆ ಜಲಪಾತ[ಬದಲಾಯಿಸಿ]

ಝರಿ ಜಲಪಾತವು ಮಜ್ಜಿಗೆ ಜಲಪಾತ ಎಂದೂ ಪ್ರಸಿದ್ಧವಾಗಿದೆ. ಇದು ಕಾಫಿ ಮತ್ತು ಚಹಾ ತೋಟಗಳಿಂದ ಆವೃತವಾಗಿದೆ. ಈ ಜಲಪಾತವು ಪರ್ವತಗಳಲ್ಲಿನ ಬುಗ್ಗೆಗಳಿಂದ ನೈಸರ್ಗಿಕವಾಗಿ ರೂಪುಗೊಳ್ಳುತ್ತದೆ.[೪][೫] ಮಜ್ಜಿಗೆ ಜಲಪಾತ ತನ್ನ ಹೆಸರನ್ನು ಫೋಮಿಂಗ್ ಕ್ಯಾಸ್ಕೇಡ್‌ನಿಂದ ಪಡೆದುಕೊಂಡಿದೆ. ಏಕೆಂದರೆ ಇದು ಕಡಿದಾದ ಕಣಿವೆಯ ಕಡೆಯಿಂದ ಕೆಯುಗಾ ಸರೋವರದ ಕಡೆಗೆ ಹರಿಯುತ್ತದೆ.

ಮಾರ್ಗ[ಬದಲಾಯಿಸಿ]

ಇಲ್ಲಿಗೆ ಭೇಟಿ ನೀಡುವ ಜನರಿಗೆ, ಖಾಸಗಿ ವಾಹನಗಳನ್ನು ಅನುಮತಿಸಲಾಗುವುದಿಲ್ಲ ಮತ್ತು ಅಲ್ಲಿನ ರಸ್ತೆಗಳು ಸುಸ್ಥಿತಿಯಲ್ಲಿ ಇಲ್ಲದೇ ಇರುವುದರಿಂದ ಜೀಪ್ ಸವಾರಿ ಮಾಡಬೇಕಾಗುತ್ತದೆ. ಇದು ದತ್ತ ಪೀಠ ರಸ್ತೆ, ಅತಿಗುಂಡಿ ಗ್ರಾಮ, ಚಿಕ್ಕಮಂಗಳೂರು, ಕರ್ನಾಟಕದಲ್ಲಿ ಇದೆ.

ಉಲ್ಲೇಖಗಳು[ಬದಲಾಯಿಸಿ]

  1. { {Cite web |last=Manohara |first=Suraj Kumar |date=2020-07-16 |title=Jhari Falls | Dabdabe Falls Trek |url=https://adventurebuddha.com/jhari-falls/ |access-date=2022-10-08 |website=Adventure Buddha |language=en-US}}
  2. https://www.trawell.in/karnataka/chikmagalur/jhari-falls-buttermilk-falls
  3. https://www.tripadvisor.in/Attraction_Review-g297629-d10423861-Reviews-or30-Jhari_Waterfalls-Chikmagalur_Chikkamagaluru_District_Karnataka.html
  4. "Jhari Falls | Jhari Waterfalls Chikmagalur – Karnataka Tourism" (in ಬ್ರಿಟಿಷ್ ಇಂಗ್ಲಿಷ್). Retrieved 2022-10-08.
  5. "Jhari Falls Chikmagalur (Timings, Entry Fee, Images, Best time to visit, Location & Information) - Chikmagalur Tourism 2022". chikmagalurtourism.org.in. Retrieved 2022-10-08.